ಕೆ. ಸುಕಲಮ್ಮ ದೇವಿ ಪ್ರೊಡಕ್ಷನ್ ಲಾಂಛನದಲ್ಲಿ ಕೆ. ಲಾಲಿಸ್ವಾಮಿ ಬಿ.ವೆಂಕಟೇಶ್ ನಿರ್ಮಿಸುತ್ತಿರುವ ಸೂರಿಗ್ಯಾಂಗ್ ಚಿತ್ರಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರೀ-ರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ಲವ್ ಆಕ್ಷನ್ ನಂತಹ ಕಥೆ ಹೊಂದಿರುವ ಸೂರಿಗ್ಯಾಂಗ್ನಲ್ಲಿ ನಾಲ್ಕು ಹಾಡುಗಳಿದ್ದು, ಈ ಹಾಡುಗಳ ಧ್ವನಿ ಸುರುಳಿಯನ್ನು ಇದೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು.
ಕೆ. ಅನ್ಬು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಕುಮಾರ ಚಕ್ರವರ್ತಿ ಛಾಯಾಗ್ರಹಣ, ಎಸ್.ನಾಗು ಸಂಗೀತ, ಡಾ|| ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಮದನ್-ಹರಿಣಿ ಶ್ರೀನಿವಾಸ ನೃತ್ಯ ನಿರ್ದೇಶನ, ಜೋನ್ಸ್- ಡಿಫರೆಂಟ್ ಡ್ಯಾನಿ ಸಾಹಸ, ಹರೀಶ ಜಿ.ಎಸ್.ರಾಜ ಸಂಕಲನ, ಹಾಗಲೂರಪ್ಪ ಸಹ ನಿರ್ಮಾಪಕರಾಗಿದ್ದು, ರಾಮ್, ಛಾಯಾಶ್ರೀ, ರಮೇಶ್ಭಟ್, ಪದ್ಮಜರಾವ್, ಬೀರಾದಾರ್, ಮೈಕೋನಾಗರಾಜ್, ಮಂಡ್ಯಜಗ್ಗಿ, ಪಟೇಲ್ರವೀಂದ್ರ, ಗಜಾ, ಆಲಿಶಾ ಮೊದಲಾದವರಿದ್ದಾರೆ.